ದಕ್ಷಿಣ ಭಾರತದ ನಟರಲ್ಲೊಬ್ಬರಾದ ಶಿವಾಜಿಗಣೇಶನ್ರವರು, 'ವಿಳುಪ್ಪುರಂ ಚಿನ್ನಯ್ಯ ಪಿಳ್ಳೈ ಗಣೇಶನ್' ಎಂಬ ಬಾಲ್ಯದ ಹೆಸರಿನ ವ್ಯಕ್ತಿ. ಶಿವಾಜಿಗಣೇಶನ್, ತಮ್ಮ ೭ ನೇ ವಯಸ್ಸಿನಲ್ಲೇ ಮನೆಬಿಟ್ಟು 'ಮಧುರೈನ ಬಾಲಗಂಗ ಸಭಾ ನಾಟಕ ಮಂಡಳಿ ' ಗೆ ಸೇರಿದರು. ಅಭಿನಯದ ಜೊತೆಗೆ ಭರತನಾಟ್ಯ, ಕಥಕ್, ಮಣಿಪುರಿ,ನೃತ್ಯಗಳನ್ನು ಕಲಿತರು. ಪರಾಶಕ್ತಿ ,ಎಂಬ ಅವರ ಪ್ರಥಮ ಚಿತ್ರದಲ್ಲಿ ಮಾಡಿದ ಅಭಿನಯ ಅವರ ೨೦ ನೆಯ ವಯಸ್ಸಿನಲ್ಲಿಯೇ ಆಯಿತು. 'ಛತ್ರಪತಿ ಶಿವಾಜಿ' ಚಿತ್ರದಿಂದ ಅವರ ಹೆಸರು ಹೆಸರು ಶಿವಾಜಿಗಣೇಶನ್ ಎಂದು ಹೆಸರಾಯಿತು. ಅವರ 'ಶಿವಾಜಿಯ ಪಾತ್ರ' ಅವರ ರಸಿಕವೃಂದವನ್ನು ತಣಿಸಿತ್ತು. ಸುಮಾರು ೩೦೦ ಸಿನಿಮಾಕ್ಕೂ ಮೀರಿ ಅಭಿನಯಿಸಿದ ಶಿವಾಜಿ ಗಣೇಶನ್, ಮೂಲತಃ ತಮಿಳು ನಟ. ತೆಲುಗು, ಕನ್ನಡ, ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದಾರೆ. ಕನ್ನಡದಲ್ಲಿ ತಯಾರಾದ ಬಿ. ಆರ್. ಪಂತಲುರವರ, 'ಸ್ಕೂಲ್ ಮಾಸ್ಟರ್ 'ಚಿತ್ರದಲ್ಲಿ ಅವರ ಅಭಿನಯ ಮನೋಜ್ಞವಾಗಿತ್ತು. == ಪ್ರಶಸ್ತಿಗಳು == ಪದ್ಮಶ್ರೀ ಪದ್ಮಭೂಷಣ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ == ಉಲ್ಲೇಖಗಳು ==